ಆವತ್ತೊಂದು ದಿನ ಹೀಗೆಯೇ ಗುತ್ತಿಗಾರು ಕಡೆಗೆ ಹೋಗಿದ್ದಾಗ ಯಾವುದೋ ಕಾರಣಕ್ಕೆ ಮಾಜಿ ಶಾಸಕ ಬಾಕಿಲ ಹುಕ್ರಪ್ಪ ನೆನಪಾದರು.ಕೂಡಲೇ ಮಿತ್ರ ಗೋಪಾಲ ಚತ್ರಪ್ಪಾಡಿಯವರಲ್ಲಿ ಅವರ ಕುರಿತು ವಿಚಾರಿಸದಾಗ ಅವ್ರು ಮನೆಯಲಿದ್ದಾರೆ ಹೋಗೋಣ , ಅಂದ್ರು ತಕ್ಷಣವೇ ಅವರ ಮನೆಗೆ ಹೋದಾಗ ಮನೆಯಲ್ಲಿ ಅದೇನೋ ಯೋಚನೆಯಲ್ಲಿ ಕುಳಿತುಕೊಂಡಿದ್ದರು. ನಮ್ಮನ್ನು ನೋಡಿದ ತಕ್ಷಣವೇ , ಹೋ. . ಸ್ವಾಮಿ, ಬಲೆ . . ಅಂತ ಹೇಳಿ, ದಾನೆ ಬತ್ತರ್ ಎಂದು ವಿಚಾರಿಸಿದಾಗ , ನಿಮ್ಮ ಸ್ಥಿತಿಯ ಬಗ್ಗೆ ಪೇಪರಿಗೆ ನ್ಯೂಸ್ ಮಾಡಲು ಬಂದದ್ದು ಅಂತ ಹೇಳಿದೆ. ಅವರು ಎಲ್ಲಾ ಡೀಟೈಲ್ಸ್ ಕೊಟ್ರು. ಅದಾಗಿ ಎರಡು ದಿನದ ನಂತರ , ಗೋಪಾಲ್ ಫೋಟೋ ಕೊಟ್ಟ ಬಳಿಕ ಉಷಾಕಿರಣದಲ್ಲಿ ನ್ಯೂಸ್ ಬಂತು. “ಮಾಜಿ ಶಾಸಕರ ಕತೆ “ ಎಂಬ ಹೆಡ್ಡಿಂಗ್‌ನಲ್ಲಿ ಆ ನ್ಯೂಸ್ ಇತ್ತು. ಇಡೀ ಪತ್ರಿಕಾ ಬಳಗದಲ್ಲಿ ಅದು ಮೊತ್ತ ಮೊದಲ ಬಾರಿಗೆ ಮಾಜಿ ಶಾಸಕ ಹುಕ್ರಪ್ಪರ ಬಗ್ಗೆ ಬರೆದ ಸುದ್ದಿಯಾಗಿತ್ತು.
ಇದನ್ನು ನೋಡಿದ ಈಟಿವಿ ವಿನಾಯಕನೂ ಇಲ್ಲಿಗೆ ಬಂದ.ಜೊತೆಗೆ ಪ್ರವೀಣ ಕೂಡಾ. ನಾನು ಇವರಿಬ್ಬರನ್ನು ಅಲ್ಲಿಗೆ ಕರೆದೊಯ್ದೆ. ಆಗ ಮಾಜಿ ಶಾಸಕರು ಗೇರು ಬೀಜ ಕೊಯ್ಯಲು ಹೋಗಿದ್ದರು.ವಿನಾಯಕ ಇದನ್ನೆಲ್ಲಾ ಶೂಟ್ ಮಾಡಿ ಬಂದ. ನಮ್ಮ ಮನೆಗೆ ಆ ನ್ಯೂಸ್ ನಂತರ ಇಬ್ಬರೂ ಬಂದು ಈ ಸ್ಟೋರಿಗೆ ಸಂಬಂಧಪಟ್ಟಂತೆ ಮೊದಲ ಪಿಟುಸಿಯನ್ನೂ ವಿನಾಯಕ ನೀಡಿದ. ಒಂದು ವಾರದೊಳಗೇ ಈಟಿವಿಯಲ್ಲಿ ಹೆಡ್‌ಲೈನ್ ನ್ಯೂಸ್ ಆಗಿ ಪ್ರಚಾರವಾಯಿತು. ಇದರ ನಂತರ ಅನೇಕ ಚಾನೆಲ್ಲುಗಳು ಬಂದವು. ಕೆಲ ಪತ್ರಿಕೆಗಳು ಆ ಬಳಿಕ ಹೊಸ ರೂಪಕೊಟ್ಟು ಟ್ಯಾಪಿಂಗ್ ನಿರತ ಶಾಸಕ ಎಂದೂ ಬರೆದವು. ಹೀಗೇ ಒಂದೊಳ್ಳೆಯ ವಿಷಯವನ್ನು ಹೊರ ತೆಗದ ಬಳಿಕ ಇಂದಿಗೂ ಹುಕ್ರಪ್ಪರ ಬಗೆ ನ್ಯೂಸ್‌ಗಳು ಬರುತ್ತಲೇ ಇರುತ್ತದೆ. ಆದರೆ ಮೊದಲ ಬಾರಿಗೆ ಈ ಸುದ್ದಿಯನ್ನು ಹೊರತೆಗೆದನೆಂಬ ಖುಷಿ ನನಗಿತ್ತು.ಜೊತೆಗೆ ವಿನಾಯಕನಿಗೂ ಈ ಸ್ಟೋರಿ ಹೊಸ ಟರ್ನ್ ಕೊಟ್ಟಿತ್ತು. ಆ ನಂತರ ಎಲ್ಲಾ ಪತ್ರಿಕೆ ಈ ನ್ಯೂಸ್ ಮಾಡಿದ್ದರು.ಮೊದಲ ಬಾರಿಗೆ ಉಷಾಕಿರಣವು ಹುಕ್ರಪ್ಪರ ಸ್ಟೋರಿ ಪ್ರಕಟಿಸಿತ್ತು. ಹುಕ್ರಪ್ಪರು ಇಂದಿಗೂ ನಮ್ಮ ಈ ಕೆಲಸವನ್ನು ನೆನಪಿಸಿಕೊಳ್ಳುತ್ತಾರೆ.