29 September 2010

ಒಂದ್ಮಾತು . .

ಬದುಕಿನ ದಾರಿಯಲ್ಲಿ ಪ್ರತೀ ಹೆಜ್ಜೆಯೂ ಮುಖ್ಯವಾಗುತ್ತದೆ. ಪ್ರತೀ ಹೆಜ್ಜೆ ಕೂಡಾ ಒಂದೊಂದು ಅನುಭವವನ್ನು ಹೇಳುತ್ತದೆ.ಅಂತಹ ಅನುಭವಗಳನ್ನು ದಾಖಲಿಸಿವುದೇ ಇದರ ಉದ್ಡೇಶ. ಇಲ್ಲಿ ಕೇವಲ ಪತ್ರಿಕಾ ಬಳಗದ ಹೆಜ್ಜೆಗಳ ಕುರಿತಾಗಿ ದಾಖಲಿಸುತ್ತೇನೆ.ನಾನು ಪತ್ರಿಕೆಯಲ್ಲಿ ಬರೆಯುವುದಕ್ಕೆ ಕಾರಣವಾದದ್ದು ನನ್ನ ಹೈಸ್ಕೂಲ್ ಬದುಕು. ನಾನು ಓದಿದ ಬಾಳಿಲದ ಶಾಲೆ ಇದಕ್ಕೆಲ್ಲಾ ನಾಂದಿಯಾಗಿತ್ತು.ಅಲ್ಲಿದ್ದ ಶಾಲಾ ಭಿತ್ತಿ ಪತ್ರವೇ ನನ್ನ ಮೊದಲ ಪತ್ರಿಕೆ.ಅಲ್ಲಿಂದ ಇಲ್ಲಿಯವರೆಗಿನ ಹೆಜ್ಜೆ ಗುರುತು ಇನ್ನು ಆರಂಭ.. . .